Tuesday, February 23, 2010

ನನ್ನದೆಯ ಮಾತು

ನನ್ನೆದೆಯ ಹೃದಯದ
ತುಂಬೆಲ್ಲಾ
ನೀ ಮೂಡಿಸಿದ
ಕಲ್ಪನೆಯ ಚಿತ್ರಗಳು
ಇನ್ನೂ ನನ್ನ ಹೃದಯದಿಂದ ಅಳಿಸಿಹೋಗಿಲ್ಲ,
ನನ್ನೆದೆಯ ತುಂಬೆಲ್ಲಾ,
ನೀ ಬಂದು ಹೋದ
ನಿನ್ನ ಆ ಸವಿನೆನಪುಗಳು
ಇನ್ನೂ ನನ್ನದೆಯಲಿ ಚಿರವಾಗಿವೆ.
ನನ್ನೆದೆಯ ಮನಸ್ಸಿನ
ತುಂಬೆಲ್ಲಾ
ನೀ ತುಂಬಿ ಹೋದ
ನಿನ್ನೆದೆಯ ಆ ಸುಮಧುರ ಮಾತು
ಇನ್ನೂ ನನ್ನದೆಯಲಿ ಶಾಶ್ವತ.
ಓ ನನ್ನ ಪ್ರೇಯಸಿ
ನೀ ನನ್ನಿಂದ ದೂರವಿದ್ದರೊ
ನೀ ಇರುವೆ ನನ್ನ ಮನದಲಿ
ಎಂದೆಂದಿಗೊ ಹತ್ತಿರ........

Monday, February 22, 2010

--->>> ಸ್ಪಂದನ


ನಿನ್ನ ನೆನಪಲ್ಲಿ
ಆಶಾಕಿರಣದ ಮಿಲನ
ನಿನ್ನ ಪ್ರೀತಿಯಲ್ಲಿ
ಜ್ಯೋತಿ ಕಿರಣದ ಸ್ಪಂದನ