Saturday, June 12, 2010

ಪ್ರೀತಿಯ Feeling.......






ನನ್ನ ಪ್ರೀತಿಯ ಸಖಿ

ನನ್ನನು ಕಂಡಾಗ,

ಮೂಡುತ್ತದೆ ಅಲ್ಲವೇ?

ನಿನ್ನ ಮೊಗದಲ್ಲಿ smile



ಅದೇಕೋ

ಗೊತ್ತಿಲ್ಲ ಕಣೇ,

ನನಗೆ ಹುಚ್ಚು ಹಿಡಿಯುತ್ತದೆ,

ಕಂಡಾಗ ನೀ ನಗುವ style





ಬಹಳ ಅಂದವಾಗಿ

ಕಾಣುತ್ತೀ ಕಣೇ,

ನೀನಿದ್ದರೂ

ತುಂಬಾ simple,





ತುಟಿ ಕಚ್ಚಬೇಕು

ಎನಿಸುತದೆ,

ಕಂಡಾಗ ನಿನ್ನ್ನ

ಕೆನ್ನೆ ಮೇಲೆ dimple,





ನಿನ್ನ ಕಿಲಕಿಲ

ನಗುವೇ, ನನ್ನೆದೆಯ

ಹಾಡಿಗೆ music,



ನೀ ಹೀಗೆ

ಎಂದಿಗೂ

ನಗುನಗುತಲಿದ್ದರೆ,

ನಾ ಬರೆಯುವೆ

ಸಾವಿರ lyric



ನನ್ನ ಮನದ

ದುಗುಡವನ್ನೆಲ್ಲಾ

ಮರೆಸಿ, ನೋವೆಲ್ಲವನು

ದೂರ ಮಾಡಿದೆ, ನೀ

ಬಳಸಿ ಪ್ರೀತಿಯ healing,



ನಾನೆಲ್ಲಿದ್ದರೂ,

ಕಣ್ಮುಚ್ಚಿ ಕುಳಿತರೂ,

ನಿದಿರೆಯಲ್ಲೂ ಕಾಡುತ್ತೆ ಚೆಲುವೆ,

ನಿನ್ನ ಪ್ರೀತಿಯ feeling...!





Saturday, March 6, 2010

---->>>> ನಿನ್ನಿಂದ




ಕಣ್ಣು ಹುಡುಕುತಿದೆ
ನಿನ್ನ ನೆರಳನ್ನು
ಮನಸು ಕೇಳುತಿದೆ
ನಿನ್ನ ಓಲವನ್ನು
ಕನಸು ಕೆದಕುತಿದೆ
ಮರೆತಿದ್ದ ನೆನಪನ್ನು


ಓ ಗೆಳತಿ,
ಅಷ್ಟು ದುಬಾರಿಯೇ
ನಿನ್ನ ನೆರಳು!?
ಅಷ್ಟು ಅಂತರವೇ
ನಿನ್ನ ಓಲವು?


ಹುಚ್ಚು ಹುಡಗನಿಗೆ
ಎಲ್ಲವೊ ಸಾದ್ಯ
ಕಾರಣ ಮರೆಯಲು
ಕಲಿತಿದ್ದೇ
ಅವನು ನಿನ್ನಿಂದ!

Tuesday, February 23, 2010

ನನ್ನದೆಯ ಮಾತು

ನನ್ನೆದೆಯ ಹೃದಯದ
ತುಂಬೆಲ್ಲಾ
ನೀ ಮೂಡಿಸಿದ
ಕಲ್ಪನೆಯ ಚಿತ್ರಗಳು
ಇನ್ನೂ ನನ್ನ ಹೃದಯದಿಂದ ಅಳಿಸಿಹೋಗಿಲ್ಲ,
ನನ್ನೆದೆಯ ತುಂಬೆಲ್ಲಾ,
ನೀ ಬಂದು ಹೋದ
ನಿನ್ನ ಆ ಸವಿನೆನಪುಗಳು
ಇನ್ನೂ ನನ್ನದೆಯಲಿ ಚಿರವಾಗಿವೆ.
ನನ್ನೆದೆಯ ಮನಸ್ಸಿನ
ತುಂಬೆಲ್ಲಾ
ನೀ ತುಂಬಿ ಹೋದ
ನಿನ್ನೆದೆಯ ಆ ಸುಮಧುರ ಮಾತು
ಇನ್ನೂ ನನ್ನದೆಯಲಿ ಶಾಶ್ವತ.
ಓ ನನ್ನ ಪ್ರೇಯಸಿ
ನೀ ನನ್ನಿಂದ ದೂರವಿದ್ದರೊ
ನೀ ಇರುವೆ ನನ್ನ ಮನದಲಿ
ಎಂದೆಂದಿಗೊ ಹತ್ತಿರ........

Monday, February 22, 2010

--->>> ಸ್ಪಂದನ


ನಿನ್ನ ನೆನಪಲ್ಲಿ
ಆಶಾಕಿರಣದ ಮಿಲನ
ನಿನ್ನ ಪ್ರೀತಿಯಲ್ಲಿ
ಜ್ಯೋತಿ ಕಿರಣದ ಸ್ಪಂದನ